ನಮ್ಮ ವಾಸಸ್ಥಳದ ಪೂರ್ವದಿಕ್ಕಿನಲ್ಲಿ ನೆಲೆಸಿ ನಮ್ಮನ್ನೆಲ್ಲ ರಕ್ಷಿಸುತ್ತಿರುವ ದೇವತೆ ಜಟಕ ದೇವರು. ‘ತಿರುಗಾಡುವ ದೇವರು’ ಎಂದು ಕರೆಯಲ್ಪಡುವ ನಾಗದೇವತೆಗಳ ವಾಸಸ್ಥಾನ. ಜಟಕ ದೇವತೆ ಎಂದು ಕರೆಯಲ್ಪಡುವ ಇದು ಬ್ರಹ್ಮ,ನಾಗ,ಜಟಕ ಮತ್ತು ಚೌಂಡಿ ಎಂಬ ನಾಲ್ಕು ದೇವತೆಗಳ ವಾಸಸ್ಥಾನ ಎಂಬ ನಂಬಿಕೆ ಇದೆ.ಅತ್ಯಂತ ಜಾಗೃತಾವಸ್ಥೆಯಲ್ಲಿರುವ ಈ ದೇವತೆಗಳು ಶಿಲಾರೂಪದಲ್ಲಿ ಕಾಣಿಸುತ್ತಿವೆ.ಈ ಶಿಲೆಗಳು ಉದ್ಭವವಾಗಿವೆಯೇ ಹೊರೆತು ಮಾನವರಿಂದ ಪ್ರತಿಷ್ಟಾಪಿಸಲ್ಪಟ್ಟಿರುವುದಿಲ್ಲ.ಆದ್ದರಿಂದ ಇದರ ಆಳ ಉದ್ದವನ್ನು ಕಂಡುಹಿಡಿಯುವುದು ವ್ಯರ್ಥಪ್ರಯತ್ನವೇ ಸರಿ.
ಈ ದೇವತೆಗಳು ಸಾತ್ವಿಕ ಆಹಾರ ಹಾಗೂ ಅತ್ಯಂತ ಪರಿಶುದ್ಧತೆಯನ್ನು ಬಯಸುತ್ತವೆ.ಇದಕ್ಕೆ ಬ್ರಾಹ್ಮಣರು ಮಾತ್ರ ಅಭಿಷೇಕ, ನೈವೇದ್ಯ ಮತ್ತು ಪೂಜೆ ಮಾಡುವ ಸಂಪ್ರದಾಯವಿದೆ.ಬ್ರಾಹ್ಮಣರೇತರಿಂದ ಪೂಜೆ ನಿಷಿದ್ಧವಾಗಿದೆ. ಪುರೋಹಿತರು ತಾವೇ ಮಾಡಿದ ಅಡಿಗೆಯಿಂದ ನೈವೇದ್ಯ ಮಾಡುತ್ತಾರೆ.
ಮಾನವನ ಒಂದು ವರ್ಷ ಈ ದೇವತೆಗಳಿಗೆ ಒಂದು ದಿನಕ್ಕೆ ಸಮ. ವರ್ಷಕೊಮ್ಮೆ ಬ್ರಾಹ್ಮಣರ ಮೂಲಕ ಸಲ್ಲಿಸುವ ನೈವೇದ್ಯ ಇತ್ಯಾದಿ ಪೂಜಾ ವಿಧಿಗಳು ಇವುಗಳಿಗೆ ಆಹಾರ. ಉಳಿದ ಸಮಯದಲ್ಲಿ ಗಾಳಿಯೇ ಆಹಾರವಾಗಿರುತ್ತದೆ. ಸಾಮಾನ್ಯವಾಗಿ ಪ್ರತಿವರ್ಷ ವೈಶಾಖ ಮಾಸ ಶುದ್ದ ಚೌತಿಯಂದು ಪೂಜೆ ಸಲ್ಲಿಸಲಾಗುತ್ತದೆ.ಆದರೆ ಇದೇ ದಿನ ಮಾಡುವುದು ಕಡ್ಡಾಯವಲ್ಲ.ಆದರೆ ಹೆಚ್ಚು ಕಾಲದವರೆಗೆ ಪೂಜೆ ಮುಂದೂಡುವುದರಿಂದ ಈ ದೇವತೆಗಳ ಕೋಪಕ್ಕೀಡಾಗಬೇಕಾಗುತ್ತದೆ. ಇದು ಈ ಹಿಂದೆ ನಮ್ಮ ಕುಟುಂಬದವರ ಅನುಭವಕ್ಕೆ ಬಂದಿರುತ್ತದೆ.
ನಾಗದೇವತೆಗಳಿಗೆ ಇಷ್ಟದ ದಿನಗಳಾದ ಪಂಚಮಿ,ಷಷ್ಠಿ ಮತ್ತು ಶ್ರಾವಣದಲ್ಲಿ ಬರುವ ನಾಗರ ಪಂಚಮಿಯಂದು ಸಹ ಪೂಜೆ ಸಲ್ಲಿಸಲ್ಪಡುವುದಿಲ್ಲ. ವಿಶೇಷವಾದ ದಿನ ಪೂಜೆ ಸಲ್ಲಿಸುವವರು ನಮ್ಮ ಕುಟುಂಬದ ಅಶ್ವಥ್ ಕಟ್ಟೆಯಲ್ಲಿರುವ ನಾಗರ ಮೂರ್ತಿಗೆ ಸ್ವತಃ ಪೂಜೆ ಸಲ್ಲಿಸಬಹುದಾಗಿದೆ.
ಇದರಂತೆ ಪ್ರತಿವರ್ಷವೂ ದೇವತೆಗಳಿಗೆ ಪೂಜೆ ಸಲ್ಲಿಸಿ ದೇವರ ಕೃಪೆಗೆ ಎಲ್ಲರೂ ಪಾತ್ರರಾಗೋಣ.
ಶ್ರೀಪಾದ.
27/04/2020.
Terms & Condition || Privacy Policy || Sitemap || Contact Us
© 2023-24 MyKVS. All rights reserved. || Powered by Onestop Website Solution
Terms & Condition
Privacy Policy
Sitemap
Contact Us
© 2023-24 MyKVS. All rights reserved. || Powered by Onestop Website Solution