ಬೆಂಗಳೂರು ಕನ್ನಡ ವೈಶ್ಯ ಸಂಘದ ಉಪಸಂಘವಾಗಿ ೧೯೭೯ರಲ್ಲಿ ದಿ. ಶ್ರೀಮತಿ ಮೀರಾಬಾಯಿ ಸುಬ್ರಹ್ಮಣ್ಯ ಶೆಟ್ಟಿರವರ ಅಧ್ಯಕ್ಷತೆಯಲ್ಲಿ ಮೈತ್ರೇಯಿ ವನಿತಾ ಸಮಾಜ ಬೆಂಗಳೂರಿನಲ್ಲಿ ಸ್ಥಾಪಿಸಲ್ಪಟ್ಟಿತು. ಸ್ವಾಮಿನಿ ಸಂಪನ್ನಾನಂದರು (ಪೂರ್ವಾಶ್ರಮದ ಹೆಸರು ಮುಕ್ತಾ ದಾಮೋದರ ಶೆಟ್ಟಿ) ಗೌ|| ಕಾರ್ಯದರ್ಶಿಗಳಾಗಿ ಅನೇಕ ಸಮಯ ಸೇವೆ ಸಲ್ಲಿಸಿದರು ಶ್ರೀಮತಿ ರಮಾಬಾಯಿ ಕೇಶವ ಶೆಟ್ಟಿ ಮತ್ತು ಶಾರದಾ ನಾರಾಯಣ ಶೆಟ್ಟಿರವರು ಸಹ ಕಾರ್ಯದರ್ಶಿಗಳಾಗಿ ಮತ್ತು ಗೌ|| ಖಜಾಂಚಿಗಳಾಗಿ ಕಾರ್ಯ ನಿರ್ವಹಿಸಿದರು. ಅವರೊಂದಿಗೆ ಕೆಲ ಸಮಯ ಶ್ರೀಮತಿ ಸುಬ್ಬಲಕ್ಷ್ಮಿ ಎಸ್. ತೋಡೂರಕರ ರವರು ಉಪಾಧ್ಯಕ್ಷರಾಗಿ ಹೇಮಲತಾ ಅನಂತ ಶೆಟ್ಟಿರವರು ಸಹ ಖಜಾಂಚಿಗಳಾಗಿ ಸಹಕರಿಸಿದರು.
ಪ್ರಾರಂಭದ ದಿನಗಳಿಂದ ಇಂದಿನವರೆಗೆ ಮೈತ್ರೇಯಿ ವನಿತಾ ಸಮಾಜದ ಕಾರ್ಯ ಚಟುವಟಿಕೆಗಳು ಇನ್ನೂ ಅನೇಕ ಸಹೋದರಿಗಳ ಸಹಕಾರದೊಂದಿಗೆ ನಿರ್ವಿಘ್ನವಾಗಿ ನಡೆಯುತ್ತಾ ಬಂದಿರುವುದು. ಈ ಸಂಘಟನೆಯ ಮುಖ್ಯ ಧ್ಯೇಯ ಎಲ್ಲಾ ಭಗಿನಿಯರ ಮನಸ್ಸನ್ನು ಕೆಲ ಸಮಯಕ್ಕಾದರೂ ಆಧ್ಯಾತ್ಮಿಕ ಚಿಂತನೆಯತ್ತ ತಿರುಗುವಂತೆ ಮಾಡಲು ಸಾಧನೆಗಳಾದ ಸಾಮೂಹಿಕ ಪೂಜೆ, ಭಜನೆ, ಸತ್ಸಂಗ ಇವೇ ಕಾರ್ಯಕ್ರಮಗಳಲ್ಲಿ ತೊಡಗುವಂತೆ ಪ್ರೇರಣೆ ನೀಡುವುದಾಗಿತ್ತು.
ಬುದ್ಧಿ ಜೀವಿಗಳಾದ ಮಾನವರು ಅನೇಕ ಋಣಗಳನ್ನು ಹುಟ್ಟುವಾಗಲೇ ಹೊತ್ತು ಬಂದಿರುತ್ತಾರೆ. ಉದಾಹರಣೆ: ಮಾತೃ ಋಣ, ಪಿತೃ ಋಣ, ದೇವ ಋಣ, ಸಮಾಜದ ಋಣ ಮುಂತಾದುವು. ಈ ಋಣಗಳಿಂದ ಮುಕ್ತರಾಗಿ ಜೀವನ್ಮುಕ್ತಿ ಯನ್ನು ಪಡೆಯಲು ನಮಗೆ ಸಾಧ್ಯವಾದ ರೀತಿಯಲ್ಲಿ ಸತ್ಸಂಗದ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಅಭಿವೃದ್ಧಿಯ ಮಾರ್ಗದತ್ತ ಮುಂದುವರಿಯುವುದು. ಎಲ್ಲರೂ ಒಟ್ಟಾಗಿ ಸಾಮೂಹಿಕವಾಗಿ ನಡೆಸುವ ಪ್ರಾರ್ಥನೆ, ಪೂಜೆ, ಭಜನೆ, ಸತ್ಸಂಗದಲ್ಲಿ ವಿಶೇಷ ಶಕ್ತಿ ಇರುವುದು. ಈ ಶಕ್ತಿ ನಮ್ಮನ್ನು ಸೂರ್ಯನ ಪ್ರಕಾಶದಂತೆ ಸದಾ ರಕ್ಷಿಸುತ್ತದೆ. ಎಲ್ಲಾ ಧರ್ಮಗಳಲ್ಲೂ ಸಾಮೂಹಿಕ ಪ್ರಾರ್ಥನೆಗೆ ವಿಶೇಷ ಸ್ಥಾನವಿದೆ.
ಅಂತೆಯೇ ನಮ್ಮ ವನಿತಾ ಸಮಾಜವು ಪ್ರತಿ ತಿಂಗಳು ತಪ್ಪದೇ ಈ ಎಲ್ಲಾ ಕಾರ್ಯಕ್ರಮಗಳನ್ನು ನಡೆಸುತ್ತಾ ಬಂದಿದೆ. ಅದರಲ್ಲೂ ಶ್ರಾವಣ ಮಾಸದ ಒಂದು ಶುಕ್ರವಾರ ‘ಅಷ್ಟಲಕ್ಷ್ಮಿ’ ಪೂಜೆಯನ್ನು ಪುರೋಹಿತರ ಸಮ್ಮುಖದಲ್ಲಿ ಭಕ್ತಿ ಪೂರ್ವಕ ವಾಗಿ ನಡೆಸುತ್ತಾ ಬಂದಿರುವೆವು. ಜೊತೆಗೆ ನವರಾತ್ರಿಯಲ್ಲಿ ಕನ್ಯಾ ಪೂಜೆ, ಶಿವರಾತ್ರಿ ದಿನದಂದು ಶಿವಸಹಸ್ರನಾಮ ಪೂಜೆ, ಅಕ್ಕಿಯಿಂದ ಅರ್ಚನೆ ಮಾಡಿ, ಆ ಅಕ್ಕಿಯ ಸಂಗ್ರಹವನ್ನು ಅನಾಥಾಶ್ರಮಕ್ಕೆ ದಾನವಾಗಿ ನೀಡುತ್ತಾ ಬಂದಿರುವೆವು.
ಸಮಾಜದಲ್ಲಿ ಅಥವಾ ಕುಟುಂಬದಲ್ಲಿ ಮಹಿಳೆಯ ಸ್ಥಾನಮಾನ ಬಹು ಮುಖ್ಯವಾಗಿದೆ. “ಯತ್ರ ನಾರ್ಯಸ್ತು ಪೂಜ್ಯತೆ ರಮಂತೇ ತತ್ರ ದೇವತಾ”ಎಲ್ಲಿ ಹೆಣ್ಣು ಮಕ್ಕಳನ್ನು ಪೂಜ್ಯ ಭಾವದಿಂದ ನೋಡುವರೋ ಅಲ್ಲಿ ದೇವತೆಗಳ ಸಾಕ್ಷಾತ್ಕಾರವಾಗುವುದೆಂಬ ನಂಬಿಕೆ. ಸದ್ಭಕ್ತರೆಲ್ಲರೂ ಒಟ್ಟಾಗಿ ಸೇರಿ ಲಲಿತಾ ಸಹಸ್ರನಾಮ, ವಿಷ್ಣು ಸಹಸ್ರ ನಾಮ, ಸೌಂದರ್ಯ ಲಹರಿ, ಭಜನೆ ಮುಂತಾದುವುಗಳನ್ನು ಪಠಿಸಿ ತಮ್ಮ ಅಮೂಲ್ಯವಾದ ಜೀವನವನ್ನು ಸಾರ್ಥಕ ಪಡಿಸಿಕೊಳ್ಳ ಲೆಂಬುದೇ ಸಂಘಟನೆಯ ಉದ್ದೇಶ.
ಇಂದು ಬೆಂಗಳೂರು ಮಹಾನಗರದಲ್ಲಿ ಮಹಿಳಾ ವೃಂದದವರು ಪ್ರತಿದಿನ ಒಂದೆಡೆ ಸೇರುವುದೆಂದರೆ ಕಷ್ಟ ಸಾಧ್ಯ. ಪರಿಸ್ಥಿತಿ ಹೀಗಿರುವುದರಿಂದ ತಿಂಗಳಿಗೊಮ್ಮೆ ಒಂದೆಡೆ ಸೇರಿ ದೇವತಾ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಾ ಬಂದಿರುವೆವು. ಮುಂಬರುವ ದಿನಗಳಲ್ಲಿ ಶ್ರೀ ಭಗವಂತನು ಎಲ್ಲಾ ಭಗಿನಿಯ ವರಿಗೆ ಆಯುರಾರೋಗ್ಯ, ಐಶ್ವರ್ಯ ದಯಪಾಲಿಸಲೆಂದು ದೇವರಲ್ಲಿ ಪ್ರಾರ್ಥನೆ.
ಕೊನೆಯದಾಗಿ ಮೈತ್ರೇಯಿ ವನಿತಾ ಸಮಾಜವು ಸ್ಥಾಪನೆಗೊಂಡು ಇಂದಿಗೆ ೩೫ ವರ್ಷ ಪೂರ್ತಿಗೊಂಡ ನಿಮಿತ್ತ ಇದರ ಸಂಕೇತವಾಗಿ “ಪಂಚತ್ರಿಂಶತ್” ಮಹೋತ್ಸವವನ್ನು ಈ ವರ್ಷ ಪೂರ್ತಿ ಆಚರಿಸುವುದಾಗಿ ನಿರ್ಧರಿಸಿದ್ದು ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುವೆವು. ಬರುವ ದಿನಗಳಲ್ಲಿ ಮಾತೃ ಸಂಘವಾದ ಬೆಂಗಳೂರು ಕನ್ನಡ ವೈಶ್ಯ ಸಂಘದ ಸಹಕಾರದೊಂದಿಗೆ ಕೆಲವು ನಮ್ಮ ಯೋಜನೆಗಳು ಕಾರ್ಯಗತ ವಾಗಲೆಂದು ಶ್ರೀ ಶ್ರೀ ಜಗದ್ಗುರುಗಳಲ್ಲಿ ಪ್ರಾರ್ಥಿಸೋಣ.
– ಶ್ರೀಮತಿ ಶಶಿಕಲಾ ಮಾಧವ ಶೆಟ್ಟಿ
ಗೌ|| ಕಾರ್ಯದರ್ಶಿ, ಮೈತ್ರೇಯಿ ವನಿತಾ ಸಮಾಜ
Terms & Condition || Privacy Policy || Sitemap || Contact Us
© 2023-24 MyKVS. All rights reserved. || Powered by Onestop Website Solution
Terms & Condition
Privacy Policy
Sitemap
Contact Us
© 2023-24 MyKVS. All rights reserved. || Powered by Onestop Website Solution
Sorry, The author name is actually – ಶ್ರೀಮತಿ ಶಶಿಕಲಾ ಮಾಧವ ಶೆಟ್ಟಿ
ಗೌ|| ಕಾರ್ಯದರ್ಶಿ, ಮೈತ್ರೇಯಿ ವನಿತಾ ಸಮಾಜ