ಪಾಲಕ್ ಸೂಪ್
ಸಾಹಿತ್ಯ:
ಪಾಲಕ್ ಸೊಪ್ಪು – ೧ ಕಟ್ಟು
ಈರುಳ್ಳಿ – ೧ ದೊಡ್ಡದು
ಟೊಮೆಟೊ – ೨ ದೊಡ್ಡದು
ಕಾಳು ಮೆಣಸು (ಪುಡಿ) – ೧ ಚಮಚ
ಉಪ್ಪು – ರುಚಿಗೆ ತಕ್ಕಷ್ಟು
ವಿಧಾನ: ಪಾಲಕ್ ಸೊಪ್ಪನ್ನು ಚೆನ್ನಾಗಿ ತೊಳೆದು ಎರಡು ವಾಟಿ ನೀರು ಕೂಡಿಸಿ ಈರುಳ್ಳಿ ಮತ್ತು ಟೊಮೆಟೊ ತುಂಡು ಮಾಡಿ ಹಾಕಿ. ಐದು ನಿಮಿಷ ಚೆನ್ನಾಗಿ ಬೇಯಿಸಿಕೊಳ್ಳಬೇಕು. ನಂತರ ಸೋಸಿ ಟೊಮೆಟೊ ಈರುಳ್ಳಿ ಮತ್ತು ಬೇಯಿಸಿದ ಸೊಪ್ಪನ್ನು ಮಿಕ್ಸಿಗೆ ಹಾಕಿ ರುಬ್ಬಿಕೊಳ್ಳಬೇಕು.
ಈಗಾಗಲೇ ಬೇಯಿಸಿ ಸೋಸಿದ ನೀರನ್ನು ರುಬ್ಬಿದ ಪೇಸ್ಟಿಗೆ ಕೂಡಿಸಿ ಐದು ನಿಮಿಷ ಕುದಿಸಿ ಉಪ್ಪು, ಕಾಳು ಮೆಣಸಿನ ಪುಡಿ ಕೂಡಿಸಬೇಕು ಸೂಪು ಚೆನ್ನಾಗಿರುತ್ತದೆ.
-ಶ್ರೀಮತಿ ವೀಣಾ ರಾಮಕೃಷ್ಣ ದೇವಧರ
ಬೆಂಗಳೂರು
Terms & Condition || Privacy Policy || Sitemap || Contact Us
© 2023-24 MyKVS. All rights reserved. || Powered by Onestop Website Solution
Terms & Condition
Privacy Policy
Sitemap
Contact Us
© 2023-24 MyKVS. All rights reserved. || Powered by Onestop Website Solution